iprabz.blogspot.com
ನನ್ನ ಕನ್ನಡ ಕುಂಚದ ಕಿರುಚಾಟ
http://iprabz.blogspot.com/2008/09/blog-post_8471.html
Sunday, 14 September 2008. ಎನ್ನ ಮನದ ಮಂಟಪದಲಿ. ಸಿಂಗರೀಸಿದೆ ಸಹಸ್ರ ಸವಿ ಕನಸುಗಳು,. ನಿನ್ನ ಕಂಡಾಕ್ಷಣ ಉದ್ಭವಿಸಿದ ಭಾವಗಳು,. ನನ್ನನಪ್ಪಿ ಅವರಿಸಿದೆ ಬೃಹದಾಗಿ ಬೆಳೆದು. ಧನಸ್ಸಿನಿಂದ ಚಿಮ್ಮಿದ ಅಮ್ಬುವಿಗೆ. ನಿನ್ನ ಅನುಪಸ್ಥಿತಿಯಲ್ಲಿ ಗುರಿಯೂ ಮರೆತು ಹೋದಂತೆ ,. ಮನಸ್ಸಿಗೆ ತಮಸ್ಸು ಒರಗಿ. ಖುಷಿಯೂ ಮಡಿದಂತೆ , ನಲಿವು ಮರೆತು ಹೋದಂತೆ. ಕ್ರಿಷ್ಣಪಥದಲಿ ಕಳೆದು ಹೋಗಿಹುದು ಬದುಕು,. ಕಣ್ಣರೆಪ್ಪೆಗಳಲೇ ನೀ ಆಡುವ ಮಾತುಗಳಿಗೆ. ಬಯಕೆಯ ಹೊಸ್ತಿಲಲೆ ಆಲಿಸುತಿದೆ ಸೋತ ಮನವು. ಮೌನವನವರಿಸಿದ ಮನಸ್ವಿಯೇ ,. ಮನಸಿಗೇಕೆ ಈ ಮೋಸದ ಮುಖವಾಡ? ಮಧುರ ಮಾತುಗಳನಾಡಿ ,. ತುಂಟ ನಗೆಯನು ಬೀರಿ,. Subscribe to: Post Comments (Atom).
iprabz.blogspot.com
ನನ್ನ ಕನ್ನಡ ಕುಂಚದ ಕಿರುಚಾಟ
http://iprabz.blogspot.com/2008/09/blog-post_6248.html
Sunday, 14 September 2008. ಪ್ರೀತಿ' ಎಂಬ ಮಾಯೆಯೇ ಕಾರಣವೇನು? ಕಳೆದು ಹೋಗಿದೆ ಎನ್ನ ಮನವು. ಜಡವಾಗಿದೆ ಎನ್ನ ತನವು. ಕನ್ಗಳಲಿ ಚಿಗಿರುಹುದು ಸುಂದರ ನಾಳೆಗಳ ಕನಸು. ಬರುವ ಬದುಕಲಿ ನಿನ್ನ ನೆರಳಾಗುವ ಮನಸು. ಹೃದಯ ಮಿಡಿತದಿ ಒಂದೇ ತುಡಿತ. ಬೆಸೆಯಲು ನಿನ್ನ ಹೆಸರ ನನ್ನೀ ಉಸಿರಿನ ಸಹಿತ. ನಿನ್ನೆ ಮೊನ್ನೆಯ ನಮ್ಮೀ ಸ್ನೇಹ . ತಂದೀತೇ ನನ್ನ ಇಂತಹ ಸನಿಹ. ಧ್ರುವಾಂತರದಲಿದ್ದ ನಾನು - ನೀನು . ಬೆರೆಯಲು 'ಪ್ರೀತಿ' ಎಂಬ ಮಾಯೆಯೇ ಕಾರಣವೇನು? Subscribe to: Post Comments (Atom). Namma Bengaluru, India. View my complete profile. 8216;I’ for India. A new communication wave.
iprabz.blogspot.com
ನನ್ನ ಕನ್ನಡ ಕುಂಚದ ಕಿರುಚಾಟ
http://iprabz.blogspot.com/2008/09/blog-post_9696.html
Sunday, 14 September 2008. ಸಾರ್ಥಕ ಜೀವನ. ಮುಗಿಲೆತ್ತರಕ್ಕೆ ಬೆಳೆದು ನಿಂತು,. ನೆರಳಾಗುವ,. ಮರವಾದರೂ ಸರಿಯೇ? ಎಷ್ಟು ಈಜಿದರೂ ,. ದಣಿಯದೆ ದುಡಿಯುವ. ಮೀನಾದರೂ ಸರಿಯೇ? ದೂರದ ದಿಗಂತದೀ ಉರಿಯುತ,. ಜಗವನು ಬೆಳಗುವ. ರವಿಯಾದರೂ ಸರಿಯೇ? ತಂಪನು ಹರಡುತ,. ಚೈತನ್ಯವ ಚಿಮ್ಮುವ. ಶಶಿಯಾದರೂ ಸರಿಯೇ? ಕಣ್ಣಿಗೆ ಕಾಣದೇ,. ಜೀವವ ತುಂಬುವ. ವಾಯುವಾದರೂ ಸರಿಯೇ? ಧರೆಯಲಿ ಇಂಗುವ,. ಝರಿಯಲಿ ಹರಿಯುವ. ಜಲವಾದರೂ ಸರಿಯೇ? ಸಾರ್ಥಕವಲ್ಲದ ,. ಗುರಿಗಳು ಇಲ್ಲದ. ಈ ಜೀವನವೇಕೆ ನಾ ಅರಿಯೇ? Subscribe to: Post Comments (Atom). Namma Bengaluru, India. View my complete profile. 8216;I’ for India.
iprabz.blogspot.com
ನನ್ನ ಕನ್ನಡ ಕುಂಚದ ಕಿರುಚಾಟ
http://iprabz.blogspot.com/2009/02/blog-post.html
Sunday, 22 February 2009. ರಂಗಜ್ಜನ ಬಾಳ ಪುರಾಣ. ಬರಗಾಲದ ನೆಲವನ್ನೇ ನೆಪವಾಗಿಸಿ. ಸುಣ್ಣ-ಬಣ್ಣ ಕಾಣದ ಶಿಥಿಲ ಗೋಡೆಗಳ ಮನೆ. ಅದರೊಳಗೆ ಕಷ್ಟಗಳ ಕಡಲ ಹೊಡೆತಕ್ಕೆ ಮುರಿದು ಮೂಲೆಸೇರಿದ ಎರಡು ಮನ. ಬರುವ ಭರಣಿ ಮಳೆಗೋ , ಬೀಸುವ ಬಿರುಗಾಳಿಗೋ. ಕಿತ್ತು ಹೋಗುವ ಸೂರು. ಜೊತೆಗೆ ನಿಲ್ಲದ ಕೃತಘ್ನ ಊರು. ಮುಂಜಾನೆಯಿಂದಲೇ ಮುಗಿಬೀಳುವ ಸಾಲವಸೂಲಿಗಾರರ ಸಾಲು. ಸುಕ್ಕುಗಟ್ಟಿದ ಹಣೆಯ ಮೇಲೆ ಇರುವ ದುರಾದೃಷ್ಟ ಗೆರೆಗಳು ಎರಡು-ಮೂರು. ತಂದೋರಗಿದೆ ಮನಗಳ ಮಧ್ಯೆ ಗಡಿರೇಖೆಗಳ ಸಹಸ್ರಾರು. ದೀಪದ ಎಣ್ಣೆಗೋ , ಹೆಂಡತಿಯ ದವಾಯಿಗೋ. ಅವಮಾನಗಳೇ ಆಭರಣಗಳಾಗಿರುವ ಅನರ್ಥ ಜೀವನ. ಪ್ರಭಾತ್. Good Keep it up bro. 22 February 2009 at 19:15.
iprabz.blogspot.com
ನನ್ನ ಕನ್ನಡ ಕುಂಚದ ಕಿರುಚಾಟ: ಕನಾಸೆ
http://iprabz.blogspot.com/2014/10/blog-post.html
Sunday, 26 October 2014. ಕಂಗಳಲಿ ತುಂಬಿ ಕಡಲಾದ ಕನಸುಗಳ. ಹಂಚಲು ಹಿಡಿ ಬೊಗಸೆಯೇ ಸಾಕೆ? ಕಟ್ಟಿ ಕೆತ್ತಿದ ಕನಸುಗಳು. ಕಳೆದು ಹೋದೀತು ಜೋಕೆ! ಆಗಸದಂತೆ ಹರಡಿದ ಆಸೆಗಳ. ಅರಿಯಲು ತಿಳಿ ಮನವೊಂದೇ ಸಾಕೆ? ಅರಿವಿಲ್ಲದೆ ಅರಳಿದ ಆಮಿಷಗಳು. ವಿಷವಾದೀತು ಜೋಕೆ! ಪ್ರಭಾತ್. Subscribe to: Post Comments (Atom). Namma Bengaluru, India. View my complete profile. 8216;I’ for India. 10 am 25th November 2008* - - - - - - - - - - - - - - - Anne was on a call helping some customer with some amendments. . Takeno.logy . Rant, Understand , explore new technologies.
iprabz.blogspot.com
ನನ್ನ ಕನ್ನಡ ಕುಂಚದ ಕಿರುಚಾಟ
http://iprabz.blogspot.com/2008/09/blog-post_7412.html
Sunday, 14 September 2008. ಕನಸಿನ ಕನ್ಯೆ. ನಿನ್ನಯ ಮಾದಕ ನೋಟಕೆ. ನಲಿಯುತ ನರ್ತಿಸೋ ನವಿಲಾದೆ. ಕಣ್ಣನು ಸೆಳೆಯುವ. ನಿನ್ನಯ ,ಶ್ವೇತ ವರ್ಣಕೆ ಸಾಟಿ ಯಾರೆಂದು. ಹುಡುಕುತ ಹುಡುಕುತ ಸುಸ್ತಾದೆ. ಬಳುಕುತ ಬೀಗುವ ,. ನಿನ್ನಯ ತನುವಿನ ಸ್ರುಷ್ಠಿಯ. ಬ್ರಹ್ಮನ ಹೊಗಳುತ ಹಾಡುತ ನನ್ನನೇ ನಾನೇ ಮರೆತ್ ಹೋದೆ. ಕನಸನು ಕಾಣುತ,. ಮೈಮನ ಮರೆಯುತ ,. ನಿನ್ನನು ನೆನಯುತ ,. ಎನ್ನರಿವಿಲ್ಲದೆ ಕವಿಯಾದೆ. Va va va . aa kanasina kanye yarendu tiliyalilla. 18 May 2010 at 23:30. Subscribe to: Post Comments (Atom). Namma Bengaluru, India. View my complete profile. 8216;I’ for India.
iprabz.blogspot.com
ನನ್ನ ಕನ್ನಡ ಕುಂಚದ ಕಿರುಚಾಟ: ಆಸೆ ..
http://iprabz.blogspot.com/2012/12/blog-post.html
Friday, 28 December 2012. ಗೆಳತಿ,. ನಿನ್ನ ನಗೆಯಿಂದ ಹರಡಿದ. ಬೆಳದಿಂಗಳ ಕಡಲಲಿ. ಮಿಂದು ಈಸುವ ಆಸೆ . ನಿನ್ನ ಕಿರುನೋಟದ ಮಿಂಚಿನಲಿ. ಮಿನುಗುವ ಅಂಗಳದಲಿ. ಮನೆಮಾಡುವ ಮಹಾದಾಸೆ . ನಿನ್ನ ಸನಿಹದಲೆ ಕುಳಿತು. ನಿನ್ನ ಮಾತುಗಳ ಸದಾ ಸವಿಯುವ. ಸಖನಾಗುವ ಸಿಹಿ ಆಸೆ. ನಿನ್ನ ಉಸಿರಿನ ತಂಪಾಗಿ. ಅಪ್ಪುಗೆಯ ಬಿಸಿಯಾಗಿ. ನಿನ್ನ ಬದುಕಾಗಿರಲು ಬಲು ಆಸೆ. ಪ್ರಭಾತ್. Subscribe to: Post Comments (Atom). Namma Bengaluru, India. View my complete profile. 8216;I’ for India. Takeno.logy . Rant, Understand , explore new technologies. A new communication wave.
iprabz.blogspot.com
ನನ್ನ ಕನ್ನಡ ಕುಂಚದ ಕಿರುಚಾಟ
http://iprabz.blogspot.com/2008/09/blog-post_4636.html
Sunday, 14 September 2008. ತುಂಬು ಕೊಳದಿ ಬಿರಿದ. ತಾವರೆಯು ,ಇಬ್ಬನಿಯ ಒಂದು ಹನಿಗೆ. ನಗೆ ಬೀರಿ ಅಭಿನಂದಿಸುವುದಿಲ್ಲವೇ? ಹುಟ್ಟಿ, ಬೆಳೆದ ಕೊಳದ, ಆ ಸಹಸ್ರ ಕೋಟಿಹನಿಗಳಿಗೆ. ಇಲ್ಲದ ಆ ಸನ್ಮಾನ ಕರಗಿ ಹೋಗುವ ಈ ಇಬ್ಬನಿಯ ಹನಿಗೆ ಏಕೆ? ಸೂಕ್ಷ್ಮವೋ, ಕ್ಷಣಿಕವೊ. ದೊರೆತ ಅಮೂಲ್ಯ ವಸ್ತುಗಳಿಗೆ ಅಭಿನಂದಿಸುವುದು ಒಳಿತು. ಬೆಳೆಗುವ ರವಿಯನೇ ಸರಿಸಿ,. ಅಗಸವ ಅಪ್ಪಿ. ಧರೆಯ ವಿರಹವ ಕಂಡು ಕುಣಿಯುವ. ಕಾರ್ಮೋಡಕೆ. ಎಂದೋ, ಎಲ್ಲೋ ಸುರುಸಿದ ನಾಲ್ಕುಹನಿಗಾಗಿ. ಹದವಾದ ಅವನಿ ಕ್ಷಮಿಸುವಿದು ಏಕೆ? ಕಷ್ಟವೋ, ನಷ್ಟವೋ. ಪಕ್ಷ ಬದಲಿಸುವ , ಆಕಾರ ಅಸ್ಥಿರ,. ಚಂಚಲ ಚಂದಿರನ ಕಂಡು ಚಕೋರಿ. ಪ್ರೀತಿಸುವ ಪರಿ. ಸಫಲವೋ , ವಿಫಲವೋ.
iprabz.blogspot.com
ನನ್ನ ಕನ್ನಡ ಕುಂಚದ ಕಿರುಚಾಟ
http://iprabz.blogspot.com/2008/09/blog-post_8446.html
Sunday, 14 September 2008. ಸ್ನೇಹದಾರೈಕೆ. ಸ್ನೆಹಸುಗಂಧದ ಸುಖಮಯ ಸವಿಯಲಿ ,. ರುದಿರವೇತನೆಯ ಹೃದಯ ಕ್ಷಣಗಳು. ಕೊಟ್ಟಾವೇ ಪ್ರೀತಿಸುಖವನ್ನು. ಭಾರದ ಹೃದಯ ಬಾರದ ಕಂಬನಿಯಲಿ. ಕೊಡುವುದು ಏನನ್ನು? ಬಾನ ಆಗಸದ ಭಾನುವಿಗೆ. ಬಾಡಿದ ಮರವು ಕೊಟ್ಟಿತೇ ನೆರಳನ್ನು? ದಿನದಿನದ ಕಣಕಣಗಳ ಕ್ಷಣಕ್ಷಣಗಲಿ. ಮೂಡಾವೂ ನಿನ್ನ ಸ್ನೇಹ ,. ಮರುಭೂಮಿಯ ಮರೀಚಿಕೆಯಂತೆ. ಮುದುಡಿದ ಮನಕೆ ,. ಸಾಗರಾಳದ ಮಾಣಿಕ್ಯದಂತೆ. ಪುಕ್ಕಕ್ಕಿತ್ತ ಕನಸುಗಳ ಕಾಮನಬಿಲ್ಲಿಗೆ. ಬಣ್ಣಗಳಾಗವೇಬದುಕಿನ ಕ್ಷಣಗಳು,. ನೀಲಿ ಆಗಸದ ಚಂದಿರನೇತಕೇ. ಸೃಷ್ಟಿಸಲಾರನುಹೊಸ ಚರಿತ್ರೆಯನು? ಧೂಳಿನ ಧರತಿಯು ದಣಿಯದು ಏತಕೆ. ಭಾವನೆಗಳ ಬಂಧನದಲಿ? This poem is nice :).
iprabz.blogspot.com
ನನ್ನ ಕನ್ನಡ ಕುಂಚದ ಕಿರುಚಾಟ
http://iprabz.blogspot.com/2008/11/blog-post.html
Thursday, 20 November 2008. ಬಾಳೆಮರ - ಬಾಳ ಸಾರ. ಹೊಲದ ಮಧ್ಯೆದಿ ಬೆಳೆದು ನಿಂತಿತ್ತೊಂದು . ಬಾಳೆಮರ . . ದರ್ಪವನ್ನೆಲ್ಲ ವರ್ಣವಾಗಿಸಿ ಬೀಗಿ ನಿಂತಿತ್ತು . ಅದರ ಎಲೆ . . ಆಗಸದ ನೀಲಿಗೆ - ಹಸಿರ ಸಿರಿವಂತಿಕೆಯ . ಮೆರೆಯುತ, ಅಹಮ್ಕಾರದಿ ಆರ್ಭಟಿಸಿತ್ತು, ಅದು ನೋಡ . ಬದುಕ ನೀತಿಯ ಕಲಿತು , ಬರುವ ನಾಳೆಯ ಅರಿತು . ಅದೇ ಎಲೆಯ ಬುಡಕೆ ಒರಗಿತ್ತು , ಒಂದು ಬಾಳೆ. 160;ಗೊನೆ. . ಭಾರವನು ಹೊತ್ತು, ಬೆಳೆಸಿ ನಿಲ್ಲಿಸಿದ ಇಳೆಗೆ ವಿನಯದಿ ನಮಿಸಿ, . ಹೊದಿಕೆಯೊಳಹೊಕ್ಕಿ ಅಡಗಿತ್ತು. ಅದು ಕಾಣ . ದಿನವೂ ಕಳೆಯಿತು , ಋತುವೂ ಹರೆಯಿತು. ಮುದುರಿ ಒಣಗಿತು ಎಲೆಯು . ಕಲಿಯಲಾರದ ಪಾಠಕೆ . . 20 November 2008 at 17:31.